Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಅಕ್ಷರಮಾತೆಯ ಕನ್ನಡ ಗೀತೆ 1 by yallappa

SongGPT
ಅಕ್ಷರಮಾತೆಯ ಕನ್ನಡ ಗೀತೆ 1 by yallappa - Kannada Folk Spiritual,Female Vocals music cover art

ಅಕ್ಷರಮಾತೆಯ ಕನ್ನಡ ಗೀತೆ 1

Kannada Folk Spiritual,Female Vocals

0:003:44
Lyrics
Description
[Verse 1]
ಅಕ್ಷರದವ್ವನ ಭಜಿಸೋಣ
ಅಕ್ಷರ ಮಾತೆಯ ಸ್ಮರಿಸೋಣ
ಅಕ್ಷರ ದೀಪವ ಬೆಳಗೋಣ
ಸಾಕ್ಷರಾಗಿ ಬಾಳೋಣ!
[Chorus]
ನೈಗಾಂನ್ ಗ್ರಾಮದ ಜನಿಸಿಹೆಯಮ್ಮ
ಸಾವಿತ್ರಿಭಾಯಿ ನಿನ ಹೆಸರಮ್ಮ
ಜ್ಯೋತಿಬಾ ಫುಲೆಯ ವರಿಸಿದಿಯಮ್ಮ
ಎಲ್ಲರ ಪಾಲಿನ ಅಕ್ಷರದಮ್ಮ!
[Verse 2]
ಮಿಚೆಲ್ ಮಾತೆಯ ವಿದ್ಯಾರ್ಥಿಯಾಗಿ
ಶಿಕ್ಷಕ ತರಬೇತಿ ನೀ ಪಡೆದು
ಅಕ್ಷರ ದೀಕ್ಷೆಯ ನೀ ತೊಡಿಸಿ
ಬಡವರ ಬಾಳನು ಬೆಳಗಿದೆಯಮ್ಮ!
[Chorus]
ನೈಗಾಂನ್ ಗ್ರಾಮದ ಜನಿಸಿಹೆಯಮ್ಮ
ಸಾವಿತ್ರಿಭಾಯಿ ನಿನ ಹೆಸರಮ್ಮ
ಜ್ಯೋತಿಬಾ ಫುಲೆಯ ವರಿಸಿದಿಯಮ್ಮ
ಎಲ್ಲರ ಪಾಲಿನ ಅಕ್ಷರದಮ್ಮ!
[Bridge]
ಮನೆಯಲಿ ಶಾಲೆಯ ತೆರೆದು
ಅಬಲಾಶ್ರಮ ನೀ ನಡೆಸಿ
ತರತರ ಕಷ್ಟವ ಎದುರಿಸಿ
ಸಬಲತೆ ಸಾರಿದ ದೇವತೆಯಮ್ಮ!
[Verse 3]
ಶೂದ್ರರ ಪಾಲಿಗೆ ಸರಸ್ವತಿಯಾಗಿ
ಅಂಧ ಆಚರಣೆ ಹೊರದೂಡಿ
ಮಹಿಳೋದ್ಧಾರವ ನೀ ಮಾಡಿ
ಪತಿವ್ರತೆ ಸಾವಿತ್ರಿ ಎನಿಸಿದೆಯಮ್ಮ!
[Chorus]
ನೈಗಾಂನ್ ಗ್ರಾಮದ ಜನಿಸಿಹೆಯಮ್ಮ
ಸಾವಿತ್ರಿಭಾಯಿ ನಿನ ಹೆಸರಮ್ಮ
ಜ್ಯೋತಿಬಾ ಫುಲೆಯ ವರಿಸಿದಿಯಮ್ಮ
ಎಲ್ಲರ ಪಾಲಿನ ಅಕ್ಷರದಮ್ಮ!
[Outro]
ಗುರುವಿನ ಪಾದಕೆ ಹಣೆಮಣೆದು
ಅಕ್ಷರದವ್ವಗೆ ಶತಶಿರಮಣಿದು
ಅಕ್ಷರದವ್ವನ ಅನು ಕ್ಷಣ ಭಜಿಸಿ
ಬರದಿಹೆ ಇದ ಗುರುಕುಲವ ಸ್ಮರಿಸಿ!