Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

Days of Reflection 2 by Ebay

SongGPT
Days of Reflection 2 by Ebay - Folk,both vocals music cover art

Days of Reflection 2

Folk,both vocals

0:003:18
Lyrics
Description
ದಿನ ಹೀಗೆ ಕಳೆ ಕಳೆದು ಹೋಗಲು
ಸಮಯಕ್ಕೊಂದು ಬಿನ್ನಹ
ಈ ದಿನ ಜಡವಾಯಿತೆಂದೆನಿಸೆ
ಕಳೆದು ಬಿಡು ಆ ದಿನವ ನನ್ನಾಯುವಿನಿಂದ
ಸ್ವಜ್ಞ್ಯಾನ ವೃದ್ಧಿಗೆ ಬಳಸದಾ ದಿನ
ವಿಶ್ವವ ಅರಿಯದೇ ಉಳಿದ ದಿನ
ನೆನ್ನೆಗಿಂತ ನಾ ಮೇಲೇರದಾ ದಿನ
ಅಳಿಸಿ ಬಿಡು ಆ ದಿನವ ನನ್ನಾಯುವಿನಿಂದ
ಸಮಾಜದ ಒಳ-ಹೊರಹು ಕಾಣದಾ ದಿನ
ಸ್ಪೂರ್ತಿಯ ಸೆಲೆಗೆ ನೀರೆರೆಯದ ದಿನ
ಮನುಜನ ಒಳಿತಿಗೆ ತೃಣ ನೀಡದ ದಿನ
ಕಿತ್ತೊಗೆ ಆ ದಿನವ ನನ್ನಾಯುವಿನಿಂದ
ಜಿಡ್ಡುಗಟ್ಟಿ ನನ್ನ ಮೂರ್ಖನನ್ನಾಗಿಸಿದ ದಿನ
ಮಿಥ್ಯ-ಸತ್ಯಗಳನರಿಯದ ದಿನ
ಮೋಸ-ಕಪಟಕ್ಕೆ ನಾ ತಲೆ ಬಾಗಿದ ದಿನ
ಅಯ್ಯೋ! ಸುಟ್ಟು ಬಿಡು ಆ ದಿನವ ನನ್ನಾಯುವಿನಿಂದ